ಕಂದನೇಕೆ ಮಲಗನೆ

ಕಂದನೇಕೆ ಮಲಗನೆ

(ರಾಗ ಶಂಕರಾಭರಣ ಅಟತಾಳ) ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ|| ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೆ ||ಅ|| ಕಂದನೇಕೆ ಕಣ್ಣ ಮುಚ್ಚನೆ ಇಂದು ನೀರದಡದಲ್ಲಿರುವನೆ , ಏ- ನೆಂದರು ಮುಖವೆತ್ತಿ ನೋಡನೆ , ಗೋ- ವಿಂದ ಬಾ ಎಂದರೆ ಬಾಯ ತೆರೆವನೆ || ತನಯನಾಗಿ ಧರೆ ಅಳೆದನೆ , ತನ್ನ ಜನನಿಯ ಕಂಡರೆ ಸೇರನೆ ಮುನಿಗಳಂತೆ ಮೌನ ಪಿಡಿದನೆ ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ || ಸುಮ್ಮನೇತಕೆ ವ್ರತ ಕೆಡಿಸಿದನೆ ಹಮ್ಮಿನಿಂದಲಿ ಖಡ್ಗ ಪಿಡಿದನೆ ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೊ ಬೊಮ್ಮ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು