ಜಯಮಂಗಳಂ ನಿತ್ಯ ಶುಭಮಂಗಳಂ

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಭೈರವಿ ಛಾಪುತಾಳ ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಸಚ್ಚಿದಾನಂದ ಸರ್ವಗುಣಪೂರ್ಣಗೆ ಅತ್ಯಂತ ಸುಜ್ಞಾನಗಬ್ಜಾಕ್ಷಗೆ ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ ನಿತ್ಯಕಲ್ಯಾಣ ನಿರ್ದೋಷಗೆ || ವ್ಯಾಸಾವತಾರಗೆ ವೇದಉದ್ಧಾರಗೆ ಸಾಸಿರನಾಮದಾ ಸರ್ವೇಶಗೆ ವಾಸವಾಗಿದ್ದ ಶ್ರೀವೈಕುಂಠನಿಲಯಗೆ ಶೇಷಗಿರಿವಾಸ ವೆಂಕಟರಾಯಗೆ || ಅಂಬರೀಷನ ಶಾಪ ಪರಿಹರಿಸಿದವಗೆ ತುಂಬುರು ನಾರದ ಮುನಿವಂದ್ಯಗೆ ಅಂಬುಜನಾಭಗೆ ಅಜನ ಪೆತ್ತವನಿಗೆ ಕಂಬುಕಂಧರ ಪುರಂದರವಿಠಲರಾಯಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು