ಕಾಯಬೇಕೆನ್ನ ಗೋಪಾಲ
(ರಾಗ ಕಾಪಿ ಅಟತಾಳ)
ಕಾಯಬೇಕೆನ್ನ ಗೋಪಾಲ , ಒಂದು-
ಪಾಯವನರಿಯೆನು ಭಕ್ತರಪಾಲ ||ಪ||
ಹಲವು ಜನ್ಮಗಳೆತ್ತಿ ಬಂದೆ, ಮಾಯಾ-
ಬಲವೆಂದರಿಯದೆ ಭವದೊಳು ನೊಂದೆ
ಒಲಿದು ಭಯವಾಯಿತು ಮುಂದೆ , ನೀನು
ಸುಲಭನೆಂದು ಕೇಳಿ ಶರಣೆಂದು ತಂದೆ ||
ವಿತ್ತದೊಳಗೆ ಮನವಿಟ್ಟು, ನಿನ್ನ
ಉತ್ತಮನಾಮದ ಸ್ಮರಣೆಯ ಬಿಟ್ಟು -
ನ್ಮತ್ತನಾಗಿ ಮತಿಗೆಟ್ಟು, ಇದು
ಚಿತ್ತದೊಳಗೆ ತಿಳಿದು ಬಲು ದಯವಿಟ್ಟು ||
ಈ ರೀತಿ ಪಾಪಗಳೆಲ್ಲ , ಅನ್ಯ -
ನರರೇನು ಅರಿವರು ಯಮಧರ್ಮ ಬಲ್ಲ
ನರಕಕ್ಕೆ ಒಳಗಾದೆನಲ್ಲ , ಸಿರಿ-
ವರ ನಾರಾಯಣ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments