ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ
(ರಾಗ ಮಧ್ಯಮಾವತಿ ಆದಿತಾಳ)
ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ||
ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ
ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ||
ಭಾರತ ರಾಮಾಯಣ ಪಂಚರಾತ್ರಾಗಮ
ಸಾರತತ್ವದ ಬಿಂದು ಸೇರೀತು ಒಳಗೆಂದು ||
ಅಂದುಗೆ ಕಿರುಗೆಜ್ಜೆ ಮುಂಗಾಲಿಲಳವಟ್ಟು
ಧಿಂ ಧಿಮಿ ಧಿಮಿಕೆಂದು ಕುಣಿವ ದಾಸರ ಕಂಡು ||
ನಂದನ ಕಂದ ಗೋವಿಂದ ಮುಕುಂದನ
ಚಂದವಾದ ಧ್ವನಿ ಹೋದೀತು ಕರ್ಣಕೆಂದು ||
ಹರಿಶರಣರ ಪಾದಸರಸಿಜಯುಗಳದ
ಪರಮಪಾವನವದ ರಜವು ಬಿದ್ದೀತೆಂದು ||
ಮಂಗಳಮೂರುತಿ ಪುರಂದರವಿಠಲನ
ತುಂಗವಿಕ್ರಮ ಪದದಂಗುಳಿ ಸೋಕೀತೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments