ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ

ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ

(ರಾಗ ಮುಖಾರಿ ಛಾಪು ತಾಳ) ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ ||ಪ|| ಸೃಷ್ಟಿ ಪರಿಪಾಲಕನೆ ಇದು ನಿನಗೆ ಸರಿಯೆ ||ಅ|| ಅರ್ಥವಿಲ್ಲದ ಚಿಂತೆ ಆಪ್ತರಿಲ್ಲದ ಚಿಂತೆ ವ್ಯರ್ಥವಾಯಿತು ಬದುಕು ಎಂಬ ಚಿಂತೆ ಅರ್ಥಿಯಲಿ ಇತ್ತ ಬಾರೆಂಬರಿಲ್ಲದ ಚಿಂತೆ ಪಾರ್ಥರಿಲ್ಲದೆ ಆಡಿ ಮುಳುಗುವ ಚಿಂತೆ || ಘನ್ನ ಪಾತಕರ ಕೂಡಾಡಿ ಮುಳುಗುವ ಚಿಂತೆ ಮನ್ನಿಸುವ ನೃಪರಿಲ್ಲದಿರುವ ಕಡುಚಿಂತೆ || ಸತಿಸುತರು ಬಾಂಧವರ ಸಲಹಬೇಕೆಂಬ ಚಿಂತೆ ಮತಿಹೀನರ ಸಂಗ ಮಾಡ್ದ ಚಿಂತೆ ಅತಿಶಯದ ಧರ್ಮಪುರಿಪರವಾಸುದೇವನೆ ಪತಿಕರಿಸಿ ಪಾಲಿಸು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು