ಇದು ಏನು ನೋಡೆ

ಇದು ಏನು ನೋಡೆ

ಇದು ಏನು ನೋಡೇ ,ಇದು ರಂಗನ ಮುಖ, ಚಂದದಿ ಬಾಡೆ ಸಖಿ ||ಪ|| ನೀರೊಳಾಡಿದನೆ , ಬೆನ್ನಲಿ ದೊಡ್ಡ ಭಾರ ಪೊತ್ತನೆ ಕೋರೆದಾಡೆಯಿಂದ ಸೀಳಿ ಕಶಿಪಿನ ಕರುಳ ಮಾಲೆಯ ಧರಿಸಿದ ನರಸಿಂಹ ರೂಪನೆ || ಧರೆಯನಳೆದ ಪಾದದಲೊಂದು , ಪರಚ್ಛೆಯ ತರಿದ ನಾರವಸ್ತ್ರವನು ಉಟ್ಟು ನಂದಗೋಕುಲದಲಿ ಮಂ- ದರಗಿರಿ ಎತ್ತಿ ತಂದ ಬೆಳೆದನಮ್ಮ || ಬತ್ತಲೆ ಇರುವ ಉತ್ತಮ ತೇಜಿ ಹತ್ತಿ ತಾನೆ ಮೆರೆವ ಭಕ್ತವತ್ಸಲ ನಮ್ಮ ಪುರಂದರವಿಠಲನ್ನ ಚಿತ್ತಕ್ಕೆ ಮೆರೆದಂತೆ ಅತ್ತಾತ ಬಿಡನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು