ದೀನರಕ್ಷಕನೆ ನಿನ್ನ ಧ್ಯಾನವೇನೋ

ದೀನರಕ್ಷಕನೆ ನಿನ್ನ ಧ್ಯಾನವೇನೋ

( ರಾಗ ಕಾಂಭೋಜ ಆದಿತಾಳ) ದೀನರಕ್ಷಕನೆ ನಿನ್ನ ಧ್ಯಾನವೇನೋ ವಿಟ್ಠಲ ಏನನಿತ್ತು ಮೆಚ್ಚಿಸುವೆನೋ ನಿನ್ನ ವಿಟ್ಠಲ || ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ ಓದಿಸಿ ಮೆಚ್ಚಿಸುವೆನೊ ವರಶೇಷಶಯನ ನಿನ್ನ || ಪಾಡಿ ನಿನ್ನ ಮೆಚ್ಚಿಸುವೆನೊ ಪವನಜ ಸ್ವಾಮಿ ನೀನೆ ಆಡಿಸಿ ಮೆಚ್ಚಿಸುವೆನೊ ಹರನಯ್ಯನಯ್ಯ ಚಿನ್ನವಿಟ್ಟು ಮೆಚ್ಚಿಸುವೆನೊ ಶ್ರೀದೇವಿಯರಸನೆ ಪೂರ್ಣಾನಂದ ಸ್ವಾಮಿ ನೀನೆ ಪುರಂದರವಿಠಲ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು