ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ

(ರಾಗ ನವರೋಜು ಆದಿತಾಳ) ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ||ಪ|| ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಹಣಿಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಬಡೆದರೆ ಕೈಂ ಕುಂಯಿ ರಾಗವ ಮಾಡುವಿರಿ || ಹುಗ್ಗಿ ಮಾಡೋ ಅಲ್ಲಿಗೆ ತಗ್ಗಿ ಬಗ್ಗಿ ನೋಡುವಿರಿ ಹುಗ್ಗಿ ಮಾಡೋ ಸೌಟಿಲಿ ಬಡೆದರೆ ಕೈಂ ಕುಂಯಿ ರಾಗವ ಪಾಡುವಿರಿ || ಹಿರೇ ಬೀದಿಯಲಿ ಓಡಾಡುವಿರಿ ಕರೇ ಬೂದಿಯಲಿ ಹೊರಳುವಿರಿ ಪುರಂದರ ವಿಟ್ಠಲರಾಯ ಈ ಪರಿ- ಪರಿಯಾಟದಿ ಸದಾ ಚರಿಸುವಿರಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು