ಹುಶ್ಶೂನ್ನ ಬಣ್ಣದ ಹಕ್ಕಿ

ಹುಶ್ಶೂನ್ನ ಬಣ್ಣದ ಹಕ್ಕಿ

(ರಾಗ ಪಂತುವರಾಳಿ ಅಟತಾಳ) ಹುಶ್ಶೂನ್ನ ಬಣ್ಣದ ಹಕ್ಕಿ ||ಪ|| ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ ||ಅ|| ಅರಿಯದ ಶಿಶುವನೆ ಗರಿಯ ಮೇಲಿರಿಸಿ ಹರಿದಾಡುವರೆ ಆಕಾಶದಲ್ಲಿ ಮರದ ತುದಿಯ ಮಾವಿನ ಹಣ್ಣ ಸವಿವುತ್ತ ಮರಳಿ ಮರಳಿ ನೀ ಬಾರಣ್ಣ ಹಕ್ಕಿ || ಹಾಳು ಹಾಳಗೊಂಡು ಹಲವು ಬಣ್ಣದ ಹಕ್ಕಿ ಕಾಲಪೆಂಡೆಯನಿಟ್ಟು ಕಪಟ ಹಕ್ಕಿ ಬಾಲಕ ಕಂಡರೆ ಅಂಜ್ಯಾನು ಬೆದರ್ಯಾನು ನಾಳೆ ನೀ ಮೊದಲು ಬಾರದಿರು ಹಕ್ಕಿ || ಪಂಕಜನಾಭನ್ನ ಸೇರಿ ಪಾವನವಾದೆ ಕುಂಕುಮವರ್ಣದ ಹಕ್ಕಿ ವೆಂಕಟರಮಣ ಪುರಂದರವಿಠಲನ್ನ ಮಂಕು ಮರುಳೆ ಇಲ್ಲಿ ಬಾರದಿರು ಹಕ್ಕಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು