ವೃಂದಾವನದೇವಿ ನಮೋ ನಮೋ

ವೃಂದಾವನದೇವಿ ನಮೋ ನಮೋ

( ರಾಗ ಮಧ್ಯಮಾವತಿ ಆದಿತಾಳ) ವೃಂದಾವನದೇವಿ ನಮೋ ನಮೋ, ಚೆಲ್ವ ಮಂದರಧರನ ಮನಃಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ|| ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಹೋಗುವುದು ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ಉನ್ನಂತ ವೈಕುಂಠ ಪದವೀವಳೆ || ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಸಂದಣಿಸುವೆ ಬಹು ಗುಪಿತದಲಿ ಬಂದು ಕುಂಕುಮ ಶಂಖಚಕ್ರ ಧರಿಸಿದರೆ ತಂದೆ ನಾರಾಯಣ ಕರೆದೊಯ್ಯುವ || ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ ಹರಿಯು ತನ್ನವರೆಂದು ಕೈ ಪಿಡಿವ || ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ ಉತ್ತಮ ವೈಕುಂಠ ಪದವೀವಳೆ ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು ಕರ್ತುನಾರಾಯಣ ಕರೆದೊಯ್ವನು || ಆವಾವಪರಿಯಲ್ಲಿ ಸೇವೆಯ ಮಾಡಲು ಪಾವನ ವೈಕುಂಠಪದವೀವಳೆ ದೇವ ಶ್ರೀ ಪುರಂದರವಿಠಲರಾಯನ ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು