ಊರಿಗೆ ಬಂದರೆ ದಾಸಯ್ಯ

ಊರಿಗೆ ಬಂದರೆ ದಾಸಯ್ಯ

( ರಾಗ ಹಿಂದುಸ್ಥಾನಿ ಕಾಪಿ ಆದಿತಾಳ) ಊರಿಗೆ ಬಂದರೆ ದಾಸಯ್ಯ, ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| ಕೇರಿಗೆ ಬಂದರೆ ದಾಸಯ್ಯ, ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ ||ಅ|| ಕೊರಳೊಳು ವನಮಾಲೆ ಧರಿಸಿದನೆ, ಕಿರು- ಬೆರಳಲಿ ಬೆಟ್ಟವನೆತ್ತಿದನೆ ಇರುಳು ಹಗಲು ನಿನ್ನ ಕಾಣದೆ ಇರಲಾರೆ ಮರುಳು ಮಾಡಿದಂಥ ದಾಸಯ್ಯ || ಕಪ್ಪು ವರ್ಣದ ದಾಸಯ್ಯ, ಕಂ- ದರ್ಪನ ಪಿತನೆಂಬೊ ದಾಸಯ್ಯ ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ ಅಪ್ಪವ ಕೊಡುವೆನು ದಾಸಯ್ಯ || ಮುಂದೇನು ದಾರಿ ದಾಸಯ್ಯ, ಚೆಲ್ವ ಪೊಂಗೊಳಲೂದುವ ದಾಸಯ್ಯ ಹಾಂಗೆ ಪೋಗದಿರು ದಾಸಯ್ಯ, ಹೊ- ನ್ನುಂಗುರ ಕೊಡುವೆನು ದಾಸಯ್ಯ || ಸಣ್ಣ ನಾಮದ ದಾಸಯ್ಯ, ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ ಸದನಕೆ ಬಂದರೆ ದಾಸಯ್ಯ, ಮಣಿ- ಸರವನು ಕೊಡುವನು ದಾಸಯ್ಯ || ಸಿಟ್ಟು ಮಾಡದಿರು ದಾಸಯ್ಯ, ಸಿರಿ- ಪುರಂದರವಿಟ್ಠಲದಾಸಯ್ಯ ರಟ್ಟು ಮಾಡದಿರು ದಾಸಯ್ಯ, ತಮ್- ಬಿಟ್ಟು ಕೊಡುವನು ದಾಸಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು