ನಿನ್ನ ಮಗ ಬೆನ್ನ ಬಿಡಲೊಲ್ಲ

ನಿನ್ನ ಮಗ ಬೆನ್ನ ಬಿಡಲೊಲ್ಲ

(ರಾಗ ಶಂಕರಾಭರಣ ಛಾಪುತಾಳ ) ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ ||ಪ|| ಅಲ್ಲಿ ನೋಡಲು ತಾನೆ ,ಇಲ್ಲಿ ನೋಡಲು ತಾನೆ ಫುಲ್ಲಲೋಚನ ಸುಪ್ರವೀಣ || ಹಿಂದೆ ನೋಡಲು ತಾನೆ , ಮುಂದೆ ನೋಡಲು ತಾನೆ ಮಂದಿರದೊಳಹೊರಗಿಹನೆ || ಮುದ್ದು ಪುರಂದರವಿಠಲರಾಯನು ಎದ್ದು ಬಂದಪ್ಪಿಕೊಂಡನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು