ಸುಮ್ಮನಿರು ಮನವೆ

ಸುಮ್ಮನಿರು ಮನವೆ

( ರಾಗ ಕಾಮವರ್ಧನಿ /ಪಂತುವರಾಳಿ ಛಾಪು ತಾಳ) ಸುಮ್ಮನಿರು ಮನವೆ, ನಿನ್ನೊಳು ನೀನು ಸುಮ್ಮನಿರು ಮನವೆ || ಯಾರಾದರು ಆಡಲಿ ಅವರರ್ತಿಯ ದೂರದಲಿ ನಿಂತು ನೋಡದಿರು ಮೀರಿ ಅವರನ್ನು ನೀ ಅಹುದಲ್ಲವೆಂದರೆ ಗಾರು ಮಾಡಿ ನಿನ್ನ ದೂರಿಗೆಳೆವೋರೋ || ಒಚ್ಚೊತ್ತು ಕೊಡೋರೊ ಒಚ್ಚೊತ್ತು ಬೇಡೋರೊ ಒಚ್ಚೊತ್ತು ನಕ್ಕು ನಲಿಯುತಿಪ್ಪರು ಹುಚ್ಚುಮನುಜರ ಸಂಗದೊಳಿದ್ದರೆ ಹುಚ್ಚುಮಾಡಿ ನಿನ್ನ ರಚ್ಚೆಗೆಳೆವೋರೋ || ಒಂದನಾಡಿದರೆ ಒಂಭತ್ತನಾಡುವರು ನಿಂದಿಸಿ ನುಡಿವರು ಗುರುಹರಿಯರ ತಂದೆ ಪುರಂದರವಿಠಲರಾಯನ ಕುಂದದೆ ಭಜಿಸಿ ನೀ ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು