ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು

ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು

( ರಾಗ ಆನಂದಭೈರವಿ ತ್ರಿಪುಟ ತಾಳ) ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು ||ಪ || ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||ಅ || ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ || ಕಂತುಪಿತನ ದಿವ್ಯನಾಮ ಅಂತರಂಗದೊಳಿಟ್ಟು ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ || ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು ಘನ್ನಪೂರ್ಣ ಪುರಂದರವಿಠಲನ ಭಜಿಸದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು