ತಂಗಿ ನೋಡೆ ನಮ್ಮಂಗಳದೊಳು

ತಂಗಿ ನೋಡೆ ನಮ್ಮಂಗಳದೊಳು

(ರಾಗ ಕೇದಾರಗೌಳ ಅಟತಾಳ ) ತಂಗಿ ನೋಡೆ ನಮ್ಮಂಗಳದೊಳು ಪಾಂಡು- ರಂಗ ಮೆಲ್ಲಡಿ ಇಟ್ಟು ಪೋದನಮ್ಮ ||ಪ|| ಗಂಗೆ ಜನಿಸಿ ಮೂರ್ಲೋಕಕ್ಕೆ ಮುಕುತಿಯು ತಾ ರಂಗವೊಲಿವ ಪಾದ ಮಂಗಳ ಸಾಸಿರದಳದ ಸರ್ವೋತ್ತಮ ರಂಗವಲ್ಲಿಯನಿಕ್ಕಿದಂತೆ ಶೋಭಿಸುತಿದೆ || ಸಿರಿಯಜಭವರುಗಳರಸಿ ಕಾಣರು ಸಿರಿಚರಣ ಪೂರಿತ ಬೆಳಗುತಿದೆ ವರ ವಜ್ರಾಂಕುಶ ಧ್ವಜ ಊರ್ಧ್ವರೇಖೆಯ ನೋಡಿ ಧರಣಿಗಾಭರಣವಿಟ್ಟಂತೆ ಶೋಭಿಸುತಿದೆ || ಹಿಂದಿನಾನಂತ ಜನ್ಮದ ಪಾಪಕೆ ಕೇಡು ಮುಂದಣಾನಂತ ಸುಕೃತಕೆ ಜೋಡು ತಂದೆ ಪುರಂದರವಿಠಲರಾಯ ಸುಳಿದು ಹಿಂದೆ ಮುಂದೆ ಕೋಟಿ ಕುಲವನುದ್ಧರಿಸಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು