ದಾರಿಯ ತೋರೋ ಗೋಪಾಲ

ದಾರಿಯ ತೋರೋ ಗೋಪಾಲ

ದಾರಿಯ ತೋರೋ ಗೋಪಾಲ ವಾರಿಜನಾಭ ಶ್ರೀ ವೈಕುಂಠಲೋಲ| ಸಿಕ್ಕಿದೆ ಭವಪಾಶದೊಳಗೆ ಲೆಕ್ಕವಿಲ್ಲದ ಜಂತುಗಳಿಗೆ| ದಿಕ್ಕೊಬ್ಬರಿಲ್ಲವೋ ಎನಗೆ ಕಕ್ಕಸ ಕಳೆದು ನಿನ್ನಯ ಪಾದಗಳಿಗೆ|| ಗಜರಕ್ಷಕನು ನೀನೆಂದು ಅಜರುದ್ರಾದಿಗಳಂದು| ನಿಜವಾಗಿ ಪೇಳಿದರೆಂದು ಸುಜನರೊಡೆಯನೆ ಕೇಳಿದೆ ನಾನಿಂದು|| ಸಿರಿ ಹಯವದನನೆ ಬಾರೈ ಕರೆದೆನ್ನ ದಾರಿಯ ತೋರೈ| ಪರಮ ಭಕ್ತರಿಗೆ ಇನ್ನಾರೈ ಪರಮ ಪುರುಷ ನೀನಿಲ್ಲದೆ ಗತಿಯಾರೈ||
ದಾಸ ಸಾಹಿತ್ಯ ಪ್ರಕಾರ
ಬರೆದವರು