ನಾಡಮಾತು ಬೇಡ ನಾಲಿಗೆ

ನಾಡಮಾತು ಬೇಡ ನಾಲಿಗೆ

(ರಾಗ ಮೋಹನ ಅಟತಾಳ ) ನಾಡಮಾತು ಬೇಡ ನಾಲಿಗೆ, ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ ರೂಢಿಗೆ ಶ್ರೀಹರಿ ಕೈವಲ್ಯದಾರಿಯ ನಾಮವ ನೆನೆ ಕಂಡ್ಯ ನಾಲಿಗೆ ||ಪ|| ಹಾರೆ ಹೊತ್ತಾರೆದ್ದು ನಾಲಿಗೆ , ಶ್ರೀನಿ- ವಾಸನ ನೆನೆ ಕಂಡ್ಯ ನಾಲಿಗೆ ಶಕ್ತಿಯಂತೆ ನೀನು ಮತ್ತೆ ಬೊಗಳದಿರು ಸತ್ತ್ಹಾಂಗಿರು ಕಂಡ್ಯ ನಾಲಿಗೆ || ಉಂಬೋದು ಉಡುವೋದು ನಾಲಿಗೆ, ಬಹು ತಲಿಬಿಲಿಗೊಂಡೆ ನೀ ನಾಲಿಗೆ ಮುಂದೆ ಕಾಣದೆ ಹೋಗಿ ಬಂದು ಜಗಕ್ಕೆ ತಂದು ನಿಲಿಸಿದ ನಾಲಿಗೆ || ಅತ್ತೆ ಮಾವನ ಬೈವ ನಾಲಿಗೆ, ಇದು ಮತ್ತೆ ಗಂಡನ ಬೈವ ನಾಲಿಗೆ ಸುತ್ತುಮುತ್ತರದಿಂದ ದೇವಬ್ರಹ್ಮರ ಬೈವ ನಾಯ್ಹಾಗಿರು ಕಂಡ್ಯ ನಾಲಿಗೆ || ರಸ ಬಾಯಾರುಂಬೋದು ನಾಲಿಗೆ, ಶ್ರೀನಿ- ವಾಸನ ನೆನೆ ಕಂಡ್ಯ ನಾಲಿಗೆ ಪೊಡವಿಯೊಡೆಯ ಎನ್ನ ಪುರಂದರವಿಠಲನ್ನ ನಾಮವ ನೆನೆ ಕಂಡ್ಯ ನಾಲಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು