ಮತಿಗೆಟ್ಟು ಕಾಲವ ಕಳೆಯಬೇಡ

ಮತಿಗೆಟ್ಟು ಕಾಲವ ಕಳೆಯಬೇಡ

(ರಾಗ ಪೀಲು ಏಕ ತಾಳ ) ಮತಿಗೆಟ್ಟು ಕಾಲವ ಕಳೆಯಬೇಡ ಸ- ದ್ಗತಿ ಕೊಡುವ ಹರಿಯ ನಂಬೆಲೊ ಮೂಢ ||ಪ|| ಕೋತಿಯಂತೆ ಕುಣಿಕುಣಿದಾಡಬೇಡ ಸು- ನೀತಿ ಮಾರ್ಗವ ಪಿಡಿಯಲೊ ಗಾಢ || ಹಾಳು ಕೇರಿಯೊಳು ತಿರುಗುವ ಹಂದಿಯಂತೆ, ನೀ ಬಳಲುತ್ತೆ ನಾನಾ ಜನ್ಮವೆತ್ತಿ ಬಂದೆ ಬಾಳುವ ಕಾಲಕ್ಕೆ ಮದವೇರಿ ನಿಂದೆ, ಮುಂದೆ ಮೂಳ ಮುಪ್ಪಿನಲ್ಲಿ ವಿಚಾರ ಪೊಂದಿ || ಮಡದಿ ಮಕ್ಕಳ ಪ್ರಪಂಚಕ್ಕಾಗಿ, ದುಡಿ ದುಡಿದು ಹಾಕಿದ್ಯೊ ಮುದಿಕೋಣನಾಗಿ ಮಡಿದು ಪೋಪಾಗ ಯಾರಿಲ್ಲವಾಗಿ, ಇನ್ನು ದೃಢದಿ ನಿನ್ನೊಳು ನೀನು ತಿಳಿಯೊ ಗೂಗೆ || ರಾಯರೇರೋದು ಮದಗಜವಂತೆ, ಮತ್ತೆ ಆಯದಿ ನಡೆಯೋದು ಬಾಳೆ ಸುಳಿಯಂತೆ ಹೇಯ ಸಂಸಾರ ಸ್ಥಿರವಲ್ಲವಂತೆ, ನಮ್ಮ ಜೀಯ ಪುರಂದರವಿಠಲ ದಯಮಾಡನಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು