ಮಾಡಿದ ಎನ್ನ ಫಕೀರನು

ಮಾಡಿದ ಎನ್ನ ಫಕೀರನು

(ರಾಗ ಧನಶ್ರೀ ಅಟತಾಳ ) ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ ||ಪ || ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನಯ ಕೈಯಲಿಟ್ಟ || ನಾದದ ತಂಬುರಿ ಮೋದಮಂದಾರವು ನಿಚ್ಚಂಗದ ಟೊಪ್ಪಿಗೆನಿಟ್ಟ ಬೋಧದ ಭಂಗಿ ಅಮೃತದ ಲುಂಗಿ ಸಮಾನ ಗುಳಿಗೆಯನಿಟ್ಟ || ಈ ಪರಿ ಮಾಡಿ ಬಯಲನ ತೋರಿ ಕರವನು ನೆತ್ತಿಯಲಿಟ್ಟ ಭೂಪ ಪುರಂದರವಿಟ್ಠಲರಾಯನು ತಿರುಗೆಂದಪ್ಪಣೆ ಕೊಟ್ಟ ||
ದಾಸ ಸಾಹಿತ್ಯ ಪ್ರಕಾರ
ಬರೆದವರು