ಮಧ್ವರಾಯರ ದೇವತಾರ್ಚನೆಯ

ಮಧ್ವರಾಯರ ದೇವತಾರ್ಚನೆಯ

(ರಾಗ ಕಾಂಭೋಜ ಝಂಪೆ ತಾಳ ) ಮಧ್ವರಾಯರ ದೇವತಾರ್ಚನೆಯ ||ಪ|| ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ|| ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು ಲೀಲೆ ದಿಗ್ವಿಜಯ ರಾಮಮೂರ್ತಿ ಒಂದು ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು ಚೆಲುವಸುದರ್ಶನಗಳೆರಡು ಚಕ್ರಾಂಕಿತಗಳೈದು || ಅಭಿಷೇಕಶಂಖ ಒಂದು ಅಕ್ಷಯ ಪಾತೆಯು ಒಂದು ಶುಭನಿಧಿಯ ಬಲಮುರಿ ಶಂಖ ಒಂದು ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮುದ್ರೆ ಒಂದು ಚಕ್ರಾಂಕಿತಗಳೆರಡು ಬಾಣವೆರಡು || ವೇದವ್ಯಾಸಮೂರ್ತಿ ನಾಲ್ಕು ಕ್ಷೀರದಿ ಲೋಲಾಡುವ ಕೂರ್ಮ ಒಂದು ಸ್ಮರಿಸಿ ಇಪ್ಪತ್ತೆಂಟು ಮೂರುತಿಗಳನು ಪುರಂದರವಿಠಲನ್ನ ಪೂರ್ಣ ಭಕ್ತರೆಂಬ ಈ ರಘುನಾಥ ತೀರ್ಥರು ಎಷ್ಟು ಪುಣ್ಯವಂತರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು