ಲೊಡಕ ಲೊಡಕ ಜಿಹ್ಮರ

ಲೊಡಕ ಲೊಡಕ ಜಿಹ್ಮರ

(ರಾಗ ಶಂಕರಾಭರಣ ಅಟತಾಳ ) ಲೊಡಕ ಲೊಡಕ ಜಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ || ಪ|| ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ ಮಾಡುವ ಲೊಡಲೊಟ್ಟೆಮ್ಮ ||ಅ|| ಓರೆ ಮುಂಡಾಸು ಗೀರುಗಂಧ ಸಿರಿಮೊರೆಯು ಲೊಡಕಲೊಡಲೊಟ್ಟೆಮ್ಮ ಘೋರ ಯಮದೂತರು ಗರ್ಜಿಸಿ ಎಳೆವಾಗ ಯಾರು ಬಿಡಿಸುವರಿಲ್ಲವಮ್ಮಮ್ಮ || ಹೆಂಡರುಮಕ್ಕಳು ತಂದೆತಾಯಿಗಳು ಹಿತ ಮಾಡುವ ಲೊಡಲೊಟ್ಟೆಮ್ಮ ಕಂಡೆಮದೂತರು ಕಂಡು ಕಂಡು ಎಳೆವಾಗ ಕಂಡು ಬಿಡಿಸುವರ್-ಯಾರಿಲ್ಲಮ್ಮಮ್ಮ || ನಿತ್ಯಸದಾಚಾರಂಗಳ ನಿಷ್ಠೆಯು ಗತಿರಹಿತ ಮಾಡಲು ಲೊಡಲೊಟ್ಟೆಮ್ಮ ಭಕ್ತಿ ಒಂದಲ್ಲದೆ ಪುರಂದರವಿಠಲನ ಮತ್ತೆಲ್ಲವು ಬರೆ ಲೊಡಲೊಟ್ಟೆಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು