ನೆಚ್ಚನಯ್ಯ ಹರಿ ಮೆಚ್ಚನಯ್ಯ

ನೆಚ್ಚನಯ್ಯ ಹರಿ ಮೆಚ್ಚನಯ್ಯ

(ರಾಗ ಪೂರ್ವಿ ಆದಿ ತಾಳ ) ನೆಚ್ಚನಯ್ಯ ಹರಿ ಮೆಚ್ಚನಯ್ಯ ||ಪ || ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ || ತೊಗಲಿನ ದೇಹಕೆ ಗೋಪಿ ಗಂಧ ತೇದುಕೊಂಡು ರೋಗ ಬಂದೆಮ್ಮೆಯ ಹಾಗೆ ಬರೆದುಕೊಂಬ ಮನುಜನಿಗೆ || ಮರುಳುತನವು ಮಾತಿನಲ್ಲಿ ಹೃದಯದಲ್ಲಿ ವಿಷದ ಗುಟಿಕೆ ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ || ಹಣವಿಗೆ ಹಾರೈಸಿಕೊಂಡು ತಿರುಪತಿಗ್ಹೋಹರ ಕಂಡು ಹಣಕಾಸು ಕೊಂಡು ಬಂದು ಸ್ವಾಮಿಯ ನೋಡುವವಗೆ || ಬಾಯ ಬೀಗದಲ್ಲಿ ಹೊಯ್ದು ಹಾಲು ತುಪ್ಪಗಳನು ಸವಿದು ಮೈಯು ಹುಳುತ ನಾಯಿಯಂತೆ ಬೀದಿ ತಿರುಗುವವಗೆ || ತಾನು ತನ್ನ ಮನೆಯ ಒಳಗೆ ದಾನ ಧರ್ಮಗಳನು ಕೊಡದೆ ನೀನು ದಾನ ಮಾಡು ಎಂಡು ಅನ್ಯರಿಗೆ ಹೇಳುವವಗೆ || ಏಕೋ ಭಾವ ಏಕೋ ಭಕ್ತಿ ಏಕೋ ಯುಕ್ತಿ ಏಕೋ ಮುಕ್ತಿ ಬೇಕಾದ ಪುರಂದರ ವಿಠಲನ್ನ ಭಜಿಸದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು