ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ

ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ

(ರಾಗ ಸೌರಾಷ್ಟ್ರ ಆದಿ ತಾಳ ) ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ || ಧರೆಯೊಳು ತಮನ ಮರ್ದಿಸಲೆಂದು ಮತ್ಸ್ಯನಾ, ಗೆದ್ದ ಕಾಣೆ ಭರದಿ ಮಂದರ ಪೊತ್ತು ಇಳೆಯೊಳು ಕೂರ್ಮನಾ, ಗೆದ್ದ ಕಾಣೆ ಧರೆಯ ಕದ್ದಸುರನ್ನ ಕೊಲಲೆಂದು ವರಹನಾ, ಗೆದ್ದ ಕಾಣೆ ತರಳ ಕರೆಯೆ ಕಂಭದಿಂದ ನರಸಿಂಹನಾ, ಗೆದ್ದ ಕಾಣೆ || ಚಿಕ್ಕ ವೇಷದಲಿ ದಾನವ ಬೇಡಿ ವಾಮನಾ, ಗೆದ್ದ ಕಾಣೆ ಉಕ್ಕಿನ ಕೊಡಲಿಯ ಪಿಡಿದು ಪರಶುರಾಮ, ಎದ್ದ ಕಾಣೆ ರಕ್ಕಸ ರಾವಣನ ಕೊಲಲೆಂದು ಶ್ರೀ ರಾಮ, ಎದ್ದ ಕಾಣೆ ಸೊಕ್ಕಿದ ಕಂಸನ್ನ ವಧೆ ಮಾಡೆ ಶ್ರೀ ಕೃಷ್ಣ, ಎದ್ದ ಕಾಣೆ || ಪುರದ ಸತಿಯರ ವ್ರತವನಳಿದ ಬುದ್ಧನೆದ್ದ ಕಾಣೆ ಹರುಷದಿ ತುರಗವನೇರಿದ ಕಲ್ಕ್ಯ ತಾನೆದ್ದ ಕಾಣೆ ಶರಣಾಗತರನ್ನು ಪಾಲಿಪ ಶ್ರೀಹರಿಯೆದ್ದ ಕಾಣೆ ನಮ್ಮ ವರದ ಪುರಂದರವಿಠಲ ಕೋಟಿಸೂರ್ಯನೆದ್ದ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು