ಲಾಲಿಸಿದಳು ಮಗನ, ಯಶೋದೆ

ಲಾಲಿಸಿದಳು ಮಗನ, ಯಶೋದೆ

(ರಾಗ ಆರಭಿ ಆದಿ ತಾಳ ) ಲಾಲಿಸಿದಳು ಮಗನ, ಯಶೋದೆ ಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ || ಬಾಲಕನೆ ಕೆನೆ ಹಾಲು ಮೊಸರನೀವೆ ಲೀಲೆಯಿಂದಲಿ ಎನ್ನ ತೋಳ ಮೇಲ್ ಮಲಗೆಂದು || ಮುಗುಳುನಗೆಯಿಂದ ಮುದ್ದು ತಾ ತಾರೆಂದು ಜಗದೊಡೆಯನ ಶ್ರೀ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು