ಹೊಯ್ಯೋ ಹೊಯ್ಯೋ ಹೊಯ್ಯೋ
( ರಾಗ ಆನಂದಭೈರವಿ ಛಾಪುತಾಳ)
ಹೊಯ್ಯೋ ಹೊಯ್ಯೋ ಹೊಯ್ಯೋ ಹೊಯ್ಯೋ ಡಂಗುರವ
ಅಯ್ಯ ಕೃಷ್ಣಯ್ಯನು ಪರನೆಂದು ||ಪ||
ಭಯವ ಬಿಡಿಸಿ ಸುರರ ಕಾದವರಾರಯ್ಯ
ಜಯನಾಮಕ ತಂದೆ ಪುರಂದರವಿಠಲನಲ್ಲದೆ ||ಅ||
ಹರಿಗೆ ಹಾಸಿಗೆ ಆಗಬೇಕು ಎಂದೆನುತಲಿ
ಹರನು ಏಸುಕಾಲ ತಪಗೆಯ್ದ
ಸಿರಿ ಮೊದಲಾದರು ನುತಿಸುವ ಆ ವಸ್ತು
ಪರವಸ್ತು ಎನ ತಂದೆ ಪುರಂದರವಿಠಲನ ||
ತಾಮಸ ಪುರಾಣ ತಾಮಸ ಜೀವರಿಗೆ
ನೇಮಿಸಿ ಇಹನು ಕೃಷ್ಣಯ್ಯ
ಕ್ಷೇಮ ಬಯಸಲು ನೀನೊದರಯ್ಯ ಪರನೆಂದು
ಕಾಮತಾರ್ಥವನೀವ ತಂದೆ ಪುರಂದರವಿಠಲನ ||
ಎಷ್ಟು ಅರಸಲು ಸಮರು ಆತಗೆ ಇಲ್ಲವೊ
ಅಷ್ಟು ಕರುಣನ ಕಾಣೆನೊ
ಇಷ್ಟರ ಮನೆಯಲ್ಲಿ ಕುಣಿಕುಣಿದಾಡುವ
ಅಷ್ಟಲಕ್ಷ್ಮಿಯರೊಡನೆ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments