ಮುಂಜಾನೆಯೆದ್ದು ಗೋವಿಂದ ಎನ್ನಿ

ಮುಂಜಾನೆಯೆದ್ದು ಗೋವಿಂದ ಎನ್ನಿ

(ರಾಗ ಆನಂದಭೈರವಿ ಅಟತಾಳ ) ಮುಂಜಾನೆಯೆದ್ದು ಗೋವಿಂದ ಎನ್ನಿ ||ಪ|| ನಮ್ಮನಂಜಿಪ ದುರಿತವು ದೂರವೆನ್ನಿ ||ಅ|| ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ ಶಿಶುವು ಮೊರೆಯಿಡಲು ರಕ್ಷಿಸಿದನೆನ್ನಿ ಅಸುರನರಣ್ಯದೊಳ್ ಭಸ್ಮವ ಮಾಡಲು ವಸುಧೆಯೊಳ್ ನಾಟ್ಯವನಾಡಿದನೆನ್ನಿ || ಬಲಿಯ ಬೇಡಿದನೆನ್ನಿ ಚೆಲುವ ವಾಮನನೆನ್ನಿ ಲಲನೆಯ ಅಭಿಮಾನ ಕಾಯ್ದನೆನ್ನಿ ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ ಸಲೆ ಪಾಂಡುಸುತರನ್ನು ಪಾಲಿಸಿದನೆನ್ನಿ || ಕರುಣಾಕರನೆನ್ನಿ ಕಪಟನಾಟಕನೆನ್ನಿ ಕರಿರಾಜನನು ಕಾಯ್ದ ಕೃಷ್ಣನೆನ್ನಿ ಪರಿಪರಿಯಿಂದಲಿ ಭಕ್ತರ ಸಲಹುವ ವರದ ಪುರಂದರವಿಠಲನೆನ್ನಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು