ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ

ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ

( ರಾಗ ಸೌರಾಷ್ಟ್ರ ಅಟತಾಳ) ಹರಿಪಾದವಿರಲಿಕ್ಕೆ ಪರದೈವಂಗಳಿಗೆರಗಲೇಕೆ ||ಪ|| ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ ||ಅ|| ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ ಚಿತ್ತಪಲ್ಲಟವಾಗಿ ತಿರುಗುವ ಸತಿಯನ ಸಂಗವೇಕೆ ಉತ್ತಮ ಗುರುವನು ನಿಂದನೆ ಮಾಡುವ ಶಿಷ್ಯನೇಕೆ ಶಕ್ತಿಹೀನನಾಗಿ ಸರ್ವ ಜನರ ಕೂಡೆ ಕ್ರೋಧವೇಕೆ || ಭಾಷೆಯ ಕೊಟ್ಟು ತಪ್ಪುವ ಪ್ರಭುವಿನೊಳಾಸೆಯೇಕೆ ಕಾಸಿಗೆ ಕಷ್ಟಪಡುವ ಲೋಭಿಯ ಗೆಳೆತನವೇಕೆ ವೇಶ್ಯೆಯ ನೆಚ್ಚಿ ತನ್ನ ನಾರಿಯ ಬಿಡುವಂಥ ಪುರುಷನೇಕೆ ಹಾಸಿಗೆರಿಯತು ಕಾಲ ನೀಡಲರಿಯದ ಮನುಜನೇಕೆ || ಚೆನ್ನಾಗಿ ಬಾಳ್ದು ಪುಣ್ಯವ ಮಾಡದ ಮನುಜನೇಕೆ ಸನ್ನುತ ವಿದ್ಯವ ಮೆಚ್ಚಲರಿಯದ ಅರಸನೇಕೆ ಅನ್ನವನಿಟ್ಟು ಹಂಗಿಸುತಿರುವರ ಬಾಳದೇಕೆ ಉನ್ನತ ಪುರಂದರವಿಠಲನ ನೆನೆಯದ ಜನುಮವೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು