ಹರಿಯೇ ಪರದೈವ

ಹರಿಯೇ ಪರದೈವ

( ರಾಗ ಶಂಕರಾಭರಣ ಅಟತಾಳ) ಹರಿಯೇ ಪರದೈವ ||ಪ|| ಹರವಿರಿಂಚಾದಿಗಳು ಅವನ ಸೇವಕರಯ್ಯ ||ಅ|| ಒಬ್ಬನು ನಮ್ಮ ಹರಿ ಒಬ್ಬೊಬ್ಬರಲ್ಲಿರುವ ಒಬ್ಬರ ವಶವಲ್ಲ ಸರ್ವ ಸ್ವತಂತ್ರ ಒಬ್ಬರ ನುಡಿಗಳಿಗೆ ಉಬ್ಬಿ ನಡೆದಾಡುವ ಒಬ್ಬೊಬ್ಬರಿಗೆ ಬಲು ದೂರನಾಗುವನು || ಒಬ್ಬರ ಬೇಡಿಸುವ ಒಬ್ಬರಿಂದ ನೀಡಿಸುವ ಒಬ್ಬೊಬ್ಬರಿಗೆ ಅನ್ನ ಉಣಿಸುವನೊ ಒಬ್ಬರ ಸೇವೆಗೆ ಒಲಿದು ನಿಲ್ಲುವನಯ್ಯ ಒಬ್ಬರ ಹಿಂದ್ಹಿಂದೆ ತಿರುಗುವನೊ || ಒಬ್ಬನೇ ಮಲಗಿರುವ ಆಲದ ಎಲೆ ಮೇಲೆ ಒಬ್ಬೊಬ್ಬರನು ತನ್ನ ಉದರದಿ ಇಟ್ಟು ಒಬ್ಬನೇ ನಿಲ್ಲುವ ಶಾಶ್ವತ ಮೂರ್ತಿ ಒಬ್ಬನೇ ಪರದೈವ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು