ಮರೆಯದಿರು ಹರಿಯ

ಮರೆಯದಿರು ಹರಿಯ

(ರಾಗ ಸುರುಟಿ ಆದಿ ತಾಳ ) ಮರೆಯದಿರು ಹರಿಯ, ಮರೆವರೆ ಮೂರು ಲೋಕದ ದೊರೆಯ || ಮದಗಜ ಹರಿಯೆಂದು ಒದರಲು , ಒದಗಿದ ಕ್ಷಣದಿ ಬಂದು ಮುದದಿ ನಕ್ರನ ಕೊಂದು ಸಲಹಿದ , ಸದ್ಭಕ್ತರ ಬಂಧು ಮೃದುಲ ಪ್ರಹ್ಲಾದನ ಬೆದರಿಸಿದಸುರನ ಉದರವ ಬಗಿದಂಥ ಅದ್ಭುತ ಮಹಿಮನ || ನಾರಿ ತನ್ನ ಕರೆದ ಮಾತ್ರದಿ, ಸೀರೆಯ ಮಳೆಗರೆದ ಘೋರ ಶಾಪದಿ ಬಿದ್ದ ಸ್ತ್ರೀಯುದ್ಧಾರ ದಯದಿ ಮಾಡ್ದ ಜಾರ ಅಜಾಮಿಳನ ನಾರಾಯಣನೆನೆ ಪಾರುಗಾಣಿಸಿದಪಾರಮಹಿಮನ || ಒಂದು ಬಾರಿ ಶ್ರೀಶಾ ಎಂದರೆ, ಬಂದ ದುರಿತ ನಾಶ ಬೆಂದವು ಭವಪಾಶ, ಅವರಿಗೆ ಎಂದಿಗಿಲ್ಲವೊ ಕ್ಲೇಶ ಇಂದಿರೆರಮಣ ಶ್ರೀಪುರಂದರವಿಠಲನ ಎಂದಿಗೆ ನೆನೆವರೊ ಅಂದಿಗೆ ಧನ್ಯರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು