ಮರುದಂಘ್ರಿಕಿಸಲಯ ಧ್ಯಾನ

ಮರುದಂಘ್ರಿಕಿಸಲಯ ಧ್ಯಾನ

(ರಾಗ ಗಳಿಪಂತುವರಾಳಿ ಟ್ರಿಪುಟ ತಾಳ ) ಮರುದಂಘ್ರಿಕಿಸಲಯ ಧ್ಯಾನ, ನಾ ನಿರತದಿ ಮಾಡಿ ಅರ್ಚಿಸುವೆ ಸುಜ್ಞಾನ ||ಪ || ಹರಪುರಂದರಸ್ಮರಮುಖ್ಯಾಮರ ನಿ- ಕರಯಿಚ್ಛಿತ ದಾಸ ಪಟುತರ ಭರದಿ ಭಜಿಸುವ ಸುಜನವರಕರ ಧರಣಿಯೊಳಗವತರಿಸಿ ಮೆರೆದನೆ ||ಅ || ರಘುಪತಿ ಚರಣದಿ ವಿನಯ, ಬಹು ಲಘುವಿಕ್ರಮದಿ ಕಡಲಕೊನೆಯ ಸೇರಿ ಮಘವದ್ವೈರಿ ಪಿತನರಮನೆಯ, ಪೊಕ್ಕು ಜಗನಾರೂಪದಿ ಬಹು ಸುನಯ | ಬಗೆಬಗೆ ನಗರವೆಲ್ಲ ತಿರುಗುತ ಆಗಳಕೆಗಳ ಜಾನಕಿಯ ಮುದ್ದು ಚಿಗುರುಚರಣಕ್ಕೆರಗಿ ರಭಸದಿ ಜಿಗಿದು ಆ ಕ್ಷಣ ಕೆಡಹಿ ಮೆರೆದನೆ || ಕುಂತೀ ಕುಮಾರನೆಂದೆನಿಸಿ, ಧರ್ಮ- ಕಂತ್ಯದಾಯಿಗಳ ಸಂಹರಿಸಿ ದಿ- ಗಂತರ ಕೀರ್ತಿಯ ಮೆರೆಸಿ, ತನ್ನ ಅಂತರಂಗದಿ ಹರಿಯ ಭಜಿಸಿ ಶಾಂತನವ ಮುಖ ಸ್ತೈವ್ಯ ಮೃಗಗಳ ದಂತಿರಿಪುನಾದದಲಿ ಹೆದರಿಸಿ ಪಂಥಶಪಥಕೆ ದುರುಳಯೋಧನ- ನಂತಕನ ಮಂದಿರಕೆ ಸಲಿಸಿದ || ವರಯತಿರೂಪವ ಧರಿಸಿ ,ಬಹು ದುರುಳ ಮತಗಳ ನಿರಾಕರಿಸಿ ಉರುತರ ಭಾಷ್ಯಗಳ ರಚಿಸಿ, ತನ್ನ ಶರಣೆಂಬರನು ಆದರಿಸಿ ದರ ಸುದರ್ಶನ ಅಂಕಿತವ ನಿಜ ಸುರಸುರಾನುಗರಿಗೆ ರಂಜಿಸಿ ದೊರೆ ಪುರಂದರವಿಠಲನಾ ಬಲ- ಕರದಲಿ ಗುರು ಧರಿಸಿ ತೋರಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು