ಮಂಧರಧರನು ಗೋವಿಂದ

ಮಂಧರಧರನು ಗೋವಿಂದ

(ರಾಗ ಗೌಳಿ ಅಟತಾಳ ) ಮಂಧರಧರನು ಗೋವಿಂದ ಮಂಧರ ಧರ ಗೋವಿಂದನು ಕಾ- ಳಿಂದಿಯಲಿ ನಲಿದಾಡುತ ಬಂದ ||ಪ || ಕಸ್ತೂರಿತಿಲಕ ನೊಸಲಲಿ ಎಸೆಯೆ ಮೊತ್ತದ ಗೋವಳರೊಡನೆ ಕೊಳಲೂ- ದುತ್ತ ತುತ್ತುರು ತುರುರೆನುತ || ಕೊಂಬು ಕೊಳಲು ಬೆನ್ನಲಿ ಬಲು ಮೆರೆಯೆ ರಂಭೆಯರು ಸಂಭ್ರಮದಿಂದ ನೋಡೆ ಕೊಂಬಿನ ಸ್ವರದಲಿ ಆಡುತ್ತ ಪಾಡುತ್ತ || ಸುರರು ಕಿನ್ನರು ಕಿಂಪುರುಷರೆಂಬಲ್ಲಿ ಸುರಪುಷ್ಪಂಗಳ ಮಳೆಯನು ಸುರಿಯೆ ಗುರು ಪುರಂದರವಿಠಲನಾಡಿದನಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು