ನಾ ಡೊಂಕಾದರೆ

ನಾ ಡೊಂಕಾದರೆ

(ರಾಗ ದೇಸ್ / ನಾದನಾಮಕ್ರಿಯಾ ಏಕ ತಾಳ ) ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಠಲ ||ಪ || ನದಿಯು ಡೊಂಕು ಆದರೇನು ಉದಕ ಡೊಂಕೆ ವಿಠಲ || ಹಾವು ಡೊಂಕು ಆದರೇನು ವಿಷವು ಡೊಂಕೆ ವಿಠಲ || ಪುಷ್ಪ ಡೊಂಕು ಆದರೇನು ಪರಿಮಳ ಡೊಂಕೆ ವಿಠಲ || ಆಕಳು ಡೊಂಕು ಆದರೇನು ಹಾಲು ಡೊಂಕೆ ವಿಠಲ || ಬಿಲ್ಲು ಡೊಂಕು ಆದರೇನು ಬಾಣ ಡೊಂಕೆ ವಿಠಲ || ನಾನು ಹೊಲೆಯನಾದರೆ ನಾಮ ಹೊಲೆಯೆ ವಿಠಲ || ಅಜ್ಞನೆಂದು ಕಾಯೊ ಎನ್ನ ಸುಜ್ಞ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು