ಈ ಮುದ್ದು ಕೃಷ್ಣನ

ಈ ಮುದ್ದು ಕೃಷ್ಣನ

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು|| ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರ ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ| ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ ಸಿರಿನಾಮ ಮುಕುಟ ನಾಸಿಕದ ವರಮಣಿಯ|| ಸಕಲ ದೇವೊತ್ತಮನೆ ಸರ್ವಗುಣ ಸಂಪೂರ್ಣ ಅಖಿಳಾಗಮಸ್ತುತನೆ ಅಪ್ರಾಕೃತನೆ| ಅಖಿಲ ಜೀವರ ಭಿನ್ನನೆನಿಪ ಹಯವದನನ ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ||
ದಾಸ ಸಾಹಿತ್ಯ ಪ್ರಕಾರ
ಬರೆದವರು