ಲೊಟಪಾಟ ಸಂಸಾರ ಏನಣ್ಣ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )
ಲೊಟಪಾಟ ಸಂಸಾರ ಏನಣ್ಣ
ಲೊಟಪಾಟ ಸಂಸಾರದೊಳಗೆ ಸಿಲುಕಿ ನಾ
ವಿಠಲ ನಿನ್ನ ಧ್ಯಾನವ ಮರೆತೆನಯ್ಯ ||ಪ||
ಹುಟ್ಟಿದ್ದ ಮುಂಚೆ ಹಸಿವೆಯನರಿಯೆ
ಕೊಟ್ಟಿಗೆಯೊಳಗೆ ಎಂಟು ಆನೆಯ ಕಂಡೆ
ಮನೆಯ ಒಳಗೆ ಏಳು ಕುದುರೆಯ ಕಂಡೆ
ಕಿಲ್ಲೆಯೊಳಗೆ ಏಳು ಚರಣವ ಕಂಡೆ ||
ಯಾತದ ಮೇಲೆ ಹೋತ ಮೇವುದ ಕಂಡೆ
ಮಾತನಾಡುವ ಗುಬ್ಬಿಯ ಕಂಡೆ
ರಾಜ್ಯವನಾಳುವ ಚಿಣ್ಣಾನೆ ಕಂಡೆ
ರೆಕ್ಕೆಯಿಲ್ಲದೆ ಹಾರ್ವ ಪಕ್ಷಿಯ ಕಂಡೆ ||
ಕೀಳುಕೋಟೆಯೊಳೊಬ್ಬ ಅಗಸಾಲ ಸತ್ತರೆ
ಮೇಲುಕೋಟೆಯೊಳೊಬ್ಬ ಅಗಸತಿ ಅಳುವಳು
ಅವನಿಗೂ ಅವನಿಗೂ ಸಂಬಂಧವೇನೆಂದು
ಅದು ನೋಡಿ ನಗುತಿಪ್ಪ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments