ಮಧ್ವ ಮುನಿಯೇ ನಮ್ಮ ಗುರು

ಮಧ್ವ ಮುನಿಯೇ ನಮ್ಮ ಗುರು

(ರಾಗ ಕಾಮವರ್ಧಿನಿ/ಪಂತುವರಾಳಿ ಆದಿ ತಾಳ ) ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ || ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ || ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ- ವಿಂದವ ಸೇವಿಸುತ ಆನಂದದಿಂದ ಶೋಭಿಸಿದ || ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ- ಮಾಣಿಕ್ಯವಾಗಿ ಹರಿಗೆ ಪ್ರಾಣನೆಂದೆನಿಸಿದ || ಕಟ್ಟಕಡೆಯಲಿ ಯೋಗಿ ದಿಟ್ಟನಾಗಿ ಪುರಂದರ ವಿಟ್ಠಲ ವೇದವ್ಯಾಸರ ಪೆಟ್ಟಿಗೆ ಮುಂದೊಪ್ಪುತಿಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು