ಬಂದದ್ದೆಲ್ಲಾ ಬರಲಿ
ಬಂದದ್ದೆಲ್ಲಾ ಬರಲಿ ಗೋ-
ವಿಂದನ ದಯ ನಮಗಿರಲಿ (ಪಲ್ಲವಿ)
ಮಂದರಧರ ಗೋವಿಂದ ಮುಕುಂದನ
ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ ಬರಲಿ)
ಆರು ಅರಿಯದಿರೆಲ್ಲನ ಮುರಾರಿಯು ಎನಗೆ
ಪ್ರಸನ್ನ ಘೋರ ದುರಿತದ ಬನ್ನ* ಭಯ ಹಾರಿ|
ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ
ಚರಣ ಸೇವಕರಿಗೆ ಕ್ರೂರ ಯಮನು ಶರಣಾಗತನಲ್ಲವೆ || (ಬಂದದ್ದೆಲ್ಲಾ ಬರಲಿ)
ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಕಪಟದಿಂದ |
ಇರಲು ಆ ಕ್ಷಣದಿಂದ ಹರಿ ಕೃಪೆಯವರಲ್ಲಿದ್ದ
ಕಾರಣ ಬಂದ ದುರಿತ ಭಯವು ಬಯಲಾಯಿತಲ್ಲವೆ || (ಬಂದದ್ದೆಲ್ಲಾ ಬರಲಿ)
ಸಿಂಗನ ಪೆಗಲೇರಿ ಸಾಗೆ ಕರಿಭಂಗವೇಕೆ ಮತ್ತವಗೆ
ರಂಗನ ದಯವುಳ್ಳವಗೆ ಭವ ಭಂಗದ ಬಯಕೆಯ ಹಂಗೇ |
ಮಂಗಳ ಮಹಿಮ ಶ್ರೀ ಪುರಂದರ ವಿಟ್ಠಲನ
ಹಿಂಗದ ದಯವೊಂದಿದ್ದರೇ ಸಾಲದೇ || (ಬಂದದ್ದೆಲ್ಲಾ ಬರಲಿ)
*ಬನ್ನ = ಕಷ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments