ಏನು ಮೆಚ್ಚಿದೆಲೆ ಹೆಣ್ಣೆ

ಏನು ಮೆಚ್ಚಿದೆಲೆ ಹೆಣ್ಣೆ

( ರಾಗ ಕಾಂಭೋಜ. ಝಂಪೆ ತಾಳ) ಏನು ಮೆಚ್ಚಿದೆಲೆ ಹೆಣ್ಣೆ ಏನು ಮರುಳಾದೆ ||ಪ|| ನೋಟದಿ ಚೆಲುವನಿವನೆಂಬೆನೆ ಚಂಚಲ ಮಾಟದಿ ಚೆಲುವನಿವನೆಂಬೆನೆ ಬೆನ್ನು ಗುಪುಟು ಗೂಟದಂಥ ಹಲ್ಲು ಮೊಳದುದ್ದದೆ ಮೋರೆ ಬೂಟಕತನದಿ ಬಾಯ್ದೆರೆದು ಅಂಜಿಪಗೆ || ಅಣುರೂಪದವನಿವ ನಿಲುವುಳ್ಳ ನರನಲ್ಲ ಬನವ ತರಿವನೆಂತೆ ಕೈಯಲ್ಲಿ ಕೊಡಲಿ ಮನುಜರನು ತಾ ಬಿಟ್ಟು ಕಪಿಗಳನು ಕೂಡುವ ಮನೆ ಮನೆಯನು ಪೊಕ್ಕು ಕದ್ದು ತಿಂಬುವಗೆ || ಗಂಭೀರ ಪುರುಷನಿವನೆಂಬೆನೆ ದಿಗಂಬರ ಅಂಬರದೊಳಗೆ ಕುದುರೆಯ ಕುಣಿಸುವ ಅಂಬುಜಾಕ್ಷ ಸಿರಿಪುರಂದರವಿಠಲನ ಸಂಭ್ರಮದಿ ನೀ ಮೆಚ್ಚಿ ಮದುವ್ಯಾದೆಯಲ್ಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು