ಹರಿಯ ಬಿಟ್ಟರೆ ಗತಿಯಿಲ್ಲ

ಹರಿಯ ಬಿಟ್ಟರೆ ಗತಿಯಿಲ್ಲ

( ರಾಗ ನಾದನಾಮಕ್ರಿಯಾ. ಆದಿ ತಾಳ) ಹರಿಯ ಬಿಟ್ಟರೆ ಗತಿಯಿಲ್ಲ ಮಾರುತಿ ಮರೆತಗೆ ಸಾಧನವಿಲ್ಲ ||ಪ|| ಹರಿ ಒಲಿದವರಿಗೆ ಹನುಮ ಒಲಿವ ಹನುಮ ಒಲಿಯದಿರೆ ಹರಿ ಒಲಿಯಲಿಲ್ಲ ಹರಿಸಂಕಲ್ಪವೆಲ್ಲ ಹನುಮ ಬಲ್ಲ ಹನುಮ ಬಿಟ್ಟುದನು ಹರಿ ತಾನೊಲ್ಲ || ಮೂರವತಾರದಿ ಬಂದು, ಮುಕ್ತಿ ದಾರಿಗಳೆಲ್ಲ ತೋರಿದನಿಂದು ಸಾರಿ ಜನರಿಗೆ ಅಂದು, ಮುಕ್ತಿ ಸೇರೋ ಮಾರ್ಗವ ತೋರಿದನಿಂದು || ಶತಕಲ್ಪಗಳಲಿ ಸದಾ ಈತ, ಹಂಸ ಮಂತ್ರಗಳೆಲ್ಲ ಜಪಿಸುವ ಖ್ಯಾತ ತತ್ವೇಶರಿಗನುಕೂಲನೀತ, ಗುರು ಪುರಂದರವಿಠಲನ ನಿಜದೂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು