ಗೋವಿಂದನ ಧ್ಯಾನ ಬಲು ಶುಭಕರವೋ
( ರಾಗ ಶಹಾನ. ಆದಿ ತಾಳ)
ಗೋವಿಂದನ ಧ್ಯಾನ ಬಲು ಶುಭಕರವೋ ||ಪ||
ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ ||
ಒಂದಾವರ್ತಿ ನೆನೆಯಲು ಭವಬಂಧ ಖಿಲವೋ
ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ ||
ವಿಧವಿಧ ಸಾಧನಕಿಂತ ಇದು ಘನವೋ
ಉದರಂಭರಣಕ್ಕೆ ಉಡುವೋ ವಸನಕ್ಕೆ ಇದು ಸುಸಾಧವನವೋ ||
ಶ್ರೀರಾಮಪುರಂದರವಿಠಲ ಆರಪಾರವೋ
ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments