ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ

( ರಾಗ ಶಂಕರಾಭರಣ. ಅಟ ತಾಳ) ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ ನಿಲ್ಲೊ ತಾಳೊ ತಾಳೊ ಗೋವಿಂದ ||ಪ || ಮುಖದಲ್ಲಿ ಕಿರುಬೆವರಿಟ್ಟಿದೆ ಹೊಸ ಹೊಸ ಪರಿ ಸುದ್ದಿ ಹುಟ್ಟಿದೆ ನಸುನಗುವೆಲ್ಲ ನಿನ್ನ ಕೀರ್ತಿ ಹೆಚ್ಚಿದೆ || ಕೈಯಲ್ಲಿ ಉಂಗುರ ಎಲ್ಲಿ ಹೋಗಿದೆ ನಿನ್ನ ಬದುಕೆಲ್ಲ ಅವಳಿಗೆ ಸಾಗಿದೆ ಅಲ್ಲ ಅವಳ ಮಹಿಮೆ ಹೀಗಿದೆ || ನಿನ್ನ ಕಳವು ನಾನು ಎಷ್ಟೆಂದು ಹೇಳಲಿ ಕಡೆಯಿಂದ ಕಡೆಗೆ ತಾಳಿದೆ ಕಡೆಗೆಲ್ಲ ಹರುಷ ತೋರಿದೆ ಪುರಂದರವಿಠಲ ನಿನಗೆ ನನಗೆ ಹೀಗಾಗಿದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು