ದಾರೆನೇಂದರೊ ರಂಗಯ್ಯ

ದಾರೆನೇಂದರೊ ರಂಗಯ್ಯ

( ರಾಗ ಶಂಕರಾಭರಣ. ಅಟ ತಾಳ) ದಾರೆನೇಂದರೊ ರಂಗಯ್ಯ ನಿನ್ನ ದಾರೇನೆಂದರೊ ||ಪ|| ದಾರೇನೆಂದರು ಭೂಸುರ ಲೋಕದ ಕೃತ್ಯ ತ್ರಿಜಗ ವಂದಿತ ಮುರಹರ ಮೋಹನ ನಿನ್ನ || ಸಕ್ಕರೆ ಚೀನಿಪಾಲು ಸವಿದ ತನುವಿನ ಉಕ್ಕುವ ನೊರೆ ಹಾಲುಗಳ ಮುದ್ದು ರಂಗಯ್ಯ ನಿನ್ನ || ಕಿರುನಗೆಯಲಿ ಕಿರುಗೆಜ್ಜೆಯ ಮಾಗಾಯಿ ಒಪ್ಪೆ ಕಿರುಗೆಜ್ಜೆ ಘುಲುಘುಲು ಎಂದು ಕುಣಿವ ನಿನ್ನ || ಸಕಲ ಭಾಗವತರು ಗತಿ ತಾಳದಿಂದ ತಕ್ಕಿಟ ತಕ್ಕಿಟ ತಧಿಮಿಕೆಂದು ಕುಣಿವ ನಿನ್ನ || ವೃಂದಾವನದಿ ಗೋವಿಂದ ಗೋಪಿಯ ಕಂದ ಮಂದರೋದ್ಧರ ಮುದ್ದು ಮುಖದ ಚೆಲುವನೆಂದು ನಿನ್ನ || ಥಳಥಳಿಸುವ ತಿಳಿಗಣ್ಣಿನ ಸೊಬಗಿನ ಎಳೆನಗೆ ಸುಳಿನಗೆಯ ಮುದ್ದಿಕ್ಕಿ ನಿನ್ನ || ಅಂದು ಅಜಾಮಿಳನು ನಾರಗ ಎಂದು ಕರೆಯಲಾಗಿ ವೈ- ಕುಂಠಕ್ಕೆ ಒಯ್ದೆಯೋ ದ್ವಾರಕಾ ಕೃಪಾಳು ನಿನ್ನ || ತರಳನ ಮಾತ ಕೇಳಿ ಸ್ತಂಭದಿಂದ ಉದ್ಭವಿಸಿದೆ ಹಿರಣ್ಯಕಶ್ಯಪನ ಬಾಧೆಯ ಬಿಡಿಸಿದೆಯೋ ದೇವ || ಕರುಣಾಕರ ನಮ್ಮ ಪುರಂದರವಿಠಲ ಕರೆದು ಭ- ಕ್ತರಿಗೆಲ್ಲ ವರವು ಕೊಡುವ ಸ್ವಾಮಿ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು