ಬ್ರಹ್ಮಾನಂದದ ಸಭೆಯೊಳಗಲ್ಲಿ

ಬ್ರಹ್ಮಾನಂದದ ಸಭೆಯೊಳಗಲ್ಲಿ

( ರಾಗ ನಾದನಾಮಕ್ರಿಯಾ. ಏಕ ತಾಳ) ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ ||ಪ|| ಮೂಡದು ಕೂಡದು ಉಣ್ಣದು ಮಾಣದು ಕಾಡದು ಬೇಡದು ಕಂಗೆಡದು ನಾಡ ಮಾತುಗಳ ಬಲ್ಲುದು ಆದದು ರೂಢಿಯೊಳಿರುತಿಹುದೇನಯ್ಯ || ಪೊಡವಿಗಧಿಕವೆಂಬುವರಿಗೆ ಬಲ್ಲುದು ಕಡೆಮೊದಲಿಲ್ಲದ ಒಡಲಿಹುದು ಬೆಡಗನರಿವೆನೆಂಬವರಿಗಗೋಚರ ಪೊಡವಿಯೊಳಗಣ ಭಕ್ತರ ಬಲ್ಲುದು || ನಿಲ್ಲದು ನಿಲುಕದು ಎಲ್ಲಿಗೆ ಪೋಗದು ಬಲ್ಲೆನೆಂಬವರಿಗಳವಡದು ಬಲ್ಲಿದ ನಮ್ಮ ಪುರಂದರವಿಟ್ಠಲ- ಗಲ್ಲದೆ ತಿಳಿಯದು ಜಗದೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು