ದೇವಕಿಕಂದ ಮುಕುಂದ

ದೇವಕಿಕಂದ ಮುಕುಂದ

ರಾಗ ಪೀಲು/ಆದಿ ತಾಳ ದೇವಕಿಕಂದ ಮುಕುಂದ || ಪಲ್ಲವಿ || ನಿಗಮೋಧ್ಧಾರ ನವನೀತಚೋರ ಖಗಪತಿ ವಾಹನ ಜಗದೋಧ್ಧಾರ || ೧ || ಶಂಖಚಕ್ರಧರ ಶ್ರೀ ಗೋವಿಂದ ಪಂಕಜಲೋಚನ ಪರಮಾನಂದ || ೨ || ಮಕರಕುಂಡಲಧರ ಮೋಹನವೇಷ ರುಕುಮಿಣಿ ವಲ್ಲಭ ಪಾಂಡವಪೋಷ || ೩ || ಕಂಸಮರ್ದನ ಕೌಸ್ತುಭಾಭರಣ ಹಂಸವಾಹನ ಪೂಜಿತ ಚರಣ || ೪ || ವರವೇಲಾಪುರ ಚೆನ್ನ ಪ್ರಸನ್ನ ಪುರಂದರವಿಠಲ ಸಕಲ ಗುಣಾಪೂರ್ಣ || ೫ || ~~~~ * ~~~~ ನಿಗಮೋಧ್ಧಾರ - ದಾನವರು ಕೊಂಡೊಂಯ್ದು ಅಡಗಿಸಿದ್ದ ವೇದಗಳನ್ನು ಮತ್ತೆ ಪಡೆದುಕೊಂಡು ಬಂದು ಲೋಕಕ್ಕೆ ಕೊಟ್ಟವನು (ಮತ್ಸ್ಯಾವತಾರದಲ್ಲಿ). ಖಗಪತಿವಾಹನ - ಪಕ್ಷಿಗಳಿಗೆ ಒಡೆಯನಂತಿರುವ ಗರುಡನನ್ನೇರಿ ಬರುವವನು. ಹಂಸವಾಹನಪೂಜಿತ - ಹಂಸವಾಹನನೆಂದರೆ ಬ್ರಹ್ಮ ; ಅವನಿಂದ ಪೂಜಿಸಲ್ಪಟ್ಟವನು. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು