ಎಂಥಾ ಪುಣ್ಯವೆ ಗೋಪಿ ನಿನಗೆ

ಎಂಥಾ ಪುಣ್ಯವೆ ಗೋಪಿ ನಿನಗೆ

( ರಾಗ ಖಮಾಸ್. ಅಟ ತಾಳ) ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ||ಪ|| ಇಂಥಾ ಕೃಷ್ಣಯ್ಯ ನಿನ್ ಸುತನಾಗಿರುವನಲ್ಲೆ ||ಅ|| ಸೊಲ್ಲುಗಳು ಇಲ್ಲ ಅವನ ಮಹಿಮೆ ಪೇಳೆ ಕಲ್ಲಾಗಿ ಗುಂಡಾಗಿ ನಿನ್ ತೊಟ್ಟಿಲೊಳಿಹನಮ್ಮ || ವನಜನಾಭನ್ನ ಎತ್ತುವ ಭಾಗ್ಯವ ಕಂಡು ಪೊಂದುವ ಭಾಗ್ಯ ಹ್ಯಾಂಗಮ್ಮ ಪಡೆದೆ || ಕ್ಷೀರ ಸಾಗರದೊಡೆಯ ಓಡುತಲೆ ಬಂದು ಕ್ಷೀರ ಬೇಡಿ ನಿನ್ನ ಕೊರಳ ಕಟ್ಟುವುದಕೆ || ನಿನ್ನ ಪುಣ್ಯಕೆ ಈಡು ಉಂಟೇನೆ ಪೇಳಮ್ಮ ನಿನ್ನ ಮಂದಿರದಲಿ ಕೃಷ್ಣಯ್ಯ ನಲಿವನೆ || ಲೋಕದೊಡೆಯ ರಂಗ ಭಕ್ತಿಗೆ ಮೆಚ್ಚಿ ಬಂದ ವೈಕುಂಠನಾಥ ಪುರಂದರವಿಠಲಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು