ಎನ್ನ ರಕ್ಷಿಸೊ ನೀನು

ಎನ್ನ ರಕ್ಷಿಸೊ ನೀನು

( ರಾಗ ಹುಸೇನಿ. ರೂಪಕ ತಾಳ) ಎನ್ನ ರಕ್ಷಿಸೊ ನೀನು ದೇವರ ದೇವ ||ಪ|| ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ|| ಬಾಲನ ಮೊರೆಯನ್ನು ಕೇಳಿ ಕೃಪೆಯಿಂದ ಪಾಲಿಸಿದ್ಯೋ ನರಸಿಂಹರೂಪದಿಂದ || ಪಾಷಾಣವ ಚರಣದಿ ಯೋಷಾರೂಪವ ಮಾಡಿ ದೋಷ ಸಂಹಾರ ನಿರ್ದೋಷ ಗುಣಪೂರ್ಣನೆ || ಇನಕುಲಾಂಬುಧಿ ಚಂದ್ರ ಘನ ಶುಭಗುಣಸಾಂದ್ರ ಸನಕಾದಿ ಮುನಿ ವಂದ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು