ಬೇಡವೆ ನೀನು ಹೀಗೆ.

ಬೇಡವೆ ನೀನು ಹೀಗೆ.

( ರಾಗ ಕೇದಾರಗೌಳ. ಅಟ ತಾಳ) ಬೇಡುವೆ ನೀನು ಹೀಗೆ ಕಾಡುವ ಕೃಷ್ಣನ ಕರೆದು ಬುದ್ಧಿಯ ಹೇಳೆ ||ಪ|| ಎಣ್ಣೆ ಮಂಡೆಯಲಿ ಬಣ್ಣ ಬಚ್ಚಲೊಳಗಿರೆ ಬಣ್ಣಿಸಿ ನೆರೆವೆನೆಂದು ಚದುರತೆಯಿಂದ ಬೆನ್ನನೊರೆಸಲು ಬಂದು , ಬೆದರುವಳ ತನುವ ತಕ್ಕೈಸಿ ನಿಂದು ಗೋಪ್ಯಮ್ಮ ಕೇಳು ಚಿಣ್ಣಜಾರ ನೋಡೆ ಎನ್ನ ನಾಚಿಕೆಗೊಂಡ || ನೆಲುವಿಗೆ ಹಾಲನೇರಿಸುವಳ ಕೈಪಿಡಿದು ಎಲೆಗೆ ಬಾ ಕಿವಿ ಮಾತನಾಡುವೆನೆನುತಲಿ ಬಲು ಮುದ್ದುಗಳ ಗಲ್ಲಕೆ ಇಕ್ಕುತ ಒತ್ತಿ ಮೊಲೆಪಿಡಿದು ಕೆಳಕ್ಕೆ ಕೆಡಹಲೇಕೆ ಕೆಳಗೆ ಬಿದ್ದು ನಿನ್ನ ಬಳಿಗೆ ಬಂದೆವು ಹಾಗೆ || ಮನೆಮನೆಯಲ್ಲಿ ದಂಪತಿಗಳಿರ್ದ ಮಂಚ ಘನರಾತ್ರಿ ನಡುಬೀದಿಯೊಳಿಟ್ಟು ಕುಣಿವನು ಮನುಮಥನಯ್ಯ ಕಾಣೆ, ನಮ್ಮೆಲ್ಲರ ಮನಕೆ ಸಂತಸವೀವನೆ, ಗೋಪಿಯೆ ಕೇಳು ಘನಮಹಿಮನು ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು