ದಾರಿಯೇನಿದಕೆ ಮುರಾರಿ
( ರಾಗ ಕಾಮವರ್ಧಿನಿ/ಪಂತುವರಾಳಿ. ಅಟ ತಾಳ)
ದಾರಿಯೇನಿದಕೆ ಮುರಾರಿ ನೀ ಕೈಯ ಪಿಡಿಯದಿರೆ ||ಪ||
ಕಷ್ಟ ಕರ್ಮಂಗಳ ಎಷ್ಟಾದರು ಮಾಳ್ಪೆ, ನಿಷ್ಠೂರ್‍ಅ ನುಡಿಗೆ ಗುರು ಹಿರಿಯರ
ದುಷ್ಟರ ಸಂಗವ ಬಹಳ ಮಾಡಿದರಿಂದ, ಶ್ರೇಷ್ಠರ ಸೇವೆಯೆಂದರೆ ಆಗದೆನಗೆ ||
ಪರರ ದೂಷಣೆ ಪರರ ಪಾಪಂಗಳನೆಲ್ಲ, ಪರಿಪರಿಯಲಿ ಮಾಡಿಕೊಂಬೆ ನಾನು
ಹರಿ ನಾಮಾಮೃತವ ಹೇಳುವುದ ಕೇಳದೆ, ಹರಟೆಯಿಂದ ಹೊತ್ತು ಕಳೆದೆ ನಾ ಹರಿಯೆ ||
ಪಾತಕ ಕರ್ಮಂಗಳ ಮಾಡಿದಜಮಿಳಗೆ, ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ
ನೂತನವೇಕಿನ್ನು ಸೂರ್ಯಮಂಡಲವರ್ತಿ ರೀತಿಯಾದನು ಸಿರಿ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments