ಛೀ ಛೀ ಏತರ ಜನ್ಮ

ಛೀ ಛೀ ಏತರ ಜನ್ಮ

( ರಾಗ ಪೂರ್ವಿ. ಆದಿ ತಾಳ) ಛೀ ಛೀ ಏತರ ಜನ್ಮ ,ತಿಳಿಯೋ ನೀತಿ ಧರ್ಮ ನೀತಿ ತಪ್ಪಿ ನಡೆವ ಮನುಜುನ ಬಾಯಲಿ ಬಿತ್ತೋ ಬೂದಿ || ಪ|| ಪುರಾಣ ಹೇಲುವ ಪುಂಡ, ಅವ ಮಧ್ಯ ಹರವಿಯ ಕೊಂಡ ಮುಂದುಗಾಣದೆ ಮೋಕ್ಷವ ಬೊಗಳುವ ಬರಿಯ ಮಾತಿನ ಭಂಡ || ತೀರ್ಥ ಯಾತ್ರೆಯನೆಲ್ಲ ತಿರುಗಿ ಸೊರಗಿದೆನಲ್ಲ ತೀರ್ಥದಲಿ ಮುಳುಗಿದ್ದೊಂದೆ ಮನವ ತೊಳೆಯಲಿಲ್ಲ || ವೇದವೋದಿದೆ ವ್ಯರ್ಥ ನೀತಿ ತಿಳಿಯಲಿಲ್ಲೊ ಅರ್ಥ ವೇದವೋದಿ ಭೇದ ತಿಳಿದು ಪುರಂದರವಿಠಲನ ಭಜಿಸಲಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು