ಚಂದವ ನೋಡಿರೆ

ಚಂದವ ನೋಡಿರೆ

( ರಾಗ ಮುಖಾರಿ. ಅಟ ತಾಳ) ಚಂದವ ನೋಡಿರೆ ಗೋಕುಲ- ನಂದನ ಮೂರುತಿಯ ||ಪ|| ಅಂದುಗೆ ಪಾಡಗ ಗೆಜ್ಜೆಯ ಧರಿಸಿ ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ|| ಕೊರಳ ಪದಕ ಹಾರ ಬಿಗಿದು ತರಳರೆಲ್ಲರ ಕೂಡಿಕೊಂಡು ಕುರುಳುಗೂದಲು ಅರಳೆಲೆಯ ಥಳಥಳಿಸುತ ಮೆರೆವ ಕೃಷ್ಣನ || ಉಡಿಯ ಘಂಟೆ ಘಳಿಲೆನುತ ನುಡಿದು ಮೆಲ್ಲನೆ ಪಿಡಿದುಕೊಂಡು ನಡೆಗೆ ಮಾಲುತ ಸಡಗರದಲಿ ಬೆಡಗು ಮಾಡಿ ಆಡುವ ರಂಗನ || ಬಲು ಅಸ್ಥೈರ್ಯದಿಂದಲಿ ನಲಿವ ಪುರಂದರವಿಠಲರಾಯ ಹಲವು ಸುಖವ ನಮಗಿತ್ತು ಜಲಜಲೋಚನ ಬಾಲಕೃಷ್ಣನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು