ಏನೆಂಬೆನೊಬ್ಬ ಯತಿವರ
( ರಾಗ ಕಾಂಭೋಜಿ/ನೀಲಾಂಬರಿ. ಝಂಪೆ ತಾಳ)
ಏನೆಂಬೆನೊಬ್ಬ ಯತಿವರ ದಿವ್ಯ ಮಾನಿನಿಯ
ಮನ ಮೆಚ್ಚಿ ಪೋದನೇತಕೆ ಕೇಳೇ ಕೆಳದಿ || ಪ||
ಚೆಲುವನೆಂಬವನಿಗೆ ಬಹುಕಾಲ ಮನದಿ ವೆ-
ಗ್ಗಳಿಸಿ ಮಾಡಿದ ಸೇವೆಗಳನು ಮರೆತು
ತಳಿತ ಸಂತೋಷದಿಂ ತಾನವಳ ತಕ್ಕೈಸಿ
ಜಲಜಾಕ್ಷ ಪೋದನೇತಕೆ ಕೇಳೇ ಕೆಳದಿ ||
ನಾನತಿ ಚೆಲುವೆಯೆಂದೆನುತಲಿ ಹೆಮ್ಮೆಯಲಿ ಯತಿ
ಜಾಣೆಯ ಕರೆದೊಯ್ದು ನಾನರಿಯೆ ಕೇಳೆಂದ
ತಾ ನಮ್ಮ ನಿಜಪತಿಯ ಎಳೆದೊಯ್ದು ತರ್ಕಿಸಿ
ಏನ ಮಾಡಲು ಬಿಡನು ಏನೆಂಬೆ ಕೆಳದಿ ||
ಈ ಪರಿಯ ಮೋಹ ಮಂದಿರದೊಳಗವ-
ನ ಪೊಗಿಸಿ ಬಿಟ್ಟು ಇರಲಾರಳೆನ್ನ ಪ್ರಾಣೇಶನ
ನೆಟ್ಟನೆ ಗಜನಡಿಯ ವ್ಯಾಸಮುನಿ ಪುರಂದರ
ವಿಠಲನ ಸೊಬಗು ಪೊಂದಿದಳು ಕೇಳೇ ಕೆಳದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments